ನಾವಿಕಮೈಲು
ನೌಕಾಯಾನದಲ್ಲಿ (ನ್ಯಾವಿಗೇಶನ್) ಬಳಸುವ ದೂರದ ಮೂಲಭೂತ ಏಕಮಾನ (ನಾಟಿಕಲ್ ಮೈಲ್). ಗಣನೆಯ ಸೌಕರ್ಯವನ್ನು ಅನುಲಕ್ಷಿಸಿ ಇದರ ಮೌಲ್ಯ 6080 ಅಡಿಗಳೆಂದು ಅಂಗೀಕರಿಸಲಾಗಿತ್ತು. ನಿಷ್ಕøಷ್ಟ ವ್ಯಾಖ್ಯೆ ಇದು: ಭೂತಲದ ಸಲೆಗೆ ಸಮಾನ ಸಲೆ ಇರುವ ಗೋಳಕೇಂದ್ರದಲ್ಲಿ ಕೋನದ 1 ಮಿನಿಟನ್ನು ರಚಿಸುವ (ಆ ಗೋಳದ) ಮಹಾವೃತ್ತದ ಉದ್ದ. ಇದರ ಮೌಲ್ಯ 6080.27 ಅಡಿಗಳು. ಅಂತಾರಾಷ್ಟ್ರೀಯ ಒಡಂಬಡಿಕೆಯ ಪ್ರಕಾರ ನಾವಿಕ ಮೈಲಿನ ಉದ್ದ 1852 ಮೀಟರುಗಳು.

    ಭೌಗೋಳೀಕ ಮೈಲು (ಜ್ಯಾಗ್ರಫಿಕಲ್ ಮೈಲ್) ಎಂಬುದು ಭೂಕೇಂದ್ರದಲ್ಲಿ ಕೋನದ 1 ಮಿನಿಟನ್ನು ರಚಿಸುವ ಸಮಭಾಜಕ (ಭೂಮಧ್ಯ) ವೃತ್ತದ ಉದ್ದ, ಮೌಲ್ಯ 6087.15 ಅಡಿಗಳು.

    ಮಾನಕ ಮೈಲು (ಸ್ಟ್ಯಾಟ್ಯೂಟರಿ ಮೈಲ್) ಎಂಬುದು ಭಾರತದಲ್ಲಿ (ವ್ಯಾಪಕವಾಗಿ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ) ಈ ಹಿಂದೆ ಬಳಕೆಯಲ್ಲಿದ್ದ 3280 ಅಡಿಗಳ (=1760 ಗಜಗಳ) ಅಂತರ.							    
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ